Fri. Jan 10th, 2025

ಇಂಡೋನೇಶಿಯಾ: ಇದು ವಿಶ್ವದಲ್ಲೇ ಅತೀ ದೊಡ್ಡ ಮುಸ್ಲಿಂ ರಾಷ್ಟ್ರ

ಜಗತ್ತಿನ ಜನಸಖ್ಯೆಯಲ್ಲಿ 5ನೇ ಸ್ಥಾನ ಹಾಗೂ ಮುಸ್ಲಿಂ ರಾಷ್ಟ್ರಗಳ ಪೈಕಿ ಒಂದನೇ ಸ್ಥಾನದಲ್ಲಿರು ದೇಶವಾಗಿದೆ ಇಂಡೋನೇಶಿಯಾ. ಇದು ಏಷ್ಯಾ ಖಂಡದಲ್ಲಿದೆ. ರಿಪಬ್ಲಿಕ ಆಫ್ ಇಂಡೋನೇಶಿಯಾ ಎಂಬುದು ಇದರ ಅಧಿಕೃತ ಹೆಸರು. ಜಕ್ಕಾರ‍್ತ ರಾಜಧಾನಿ. ೨೦೧೧ನೆ ಇಸವಿಯ ಪ್ರಕಾರ 19,04,569 ಚ.ಕಿ.ಮೀ ವಿಸ್ತೀರ್ಣದಲ್ಲಿ ವಿಶಾಲವಾಗಿ ಹರಡಿರುವ ಜಗತ್ತಿನ ಅತ್ಯಂತ ದೊಡ್ಡ ದ್ವೀಪ ಸಮೂಹವಾದ ಈ ರಾಷ್ಟ್ರದಲ್ಲಿ 24,23,25,638 ಜನರು ವಾಸವಾಗಿದ್ದಾರೆಂಬುವುದು ಲೆಕ್ಕಾಚಾರ. ಇಡೋನೇಶ್ಯನ್ ಎಂಬುವುದು ಅಧಿಕೃತ ರಾಷ್ಟ್ರೀಯ ಭಾಷೆ. ಗಡಿದೇಶಗಳ ಪೈಕಿ ಉತರದಲ್ಲಿ ಮಲೇಶ್ಯ, ಪಶ್ಚಿಮದಲ್ಲಿ ಹಿಂದೂ ಮಹಾ ಸಾಗರ, ಪೂರ್ವದಲ್ಲಿ ಫೆಸಿಫಿಕ್ ಸಮುದ್ರ, ಆಗ್ಯೇಯ ಭಾಗದಲ್ಲಿ ಆಸ್ಟ್ರೇಲಿಯಾ ರಾಷ್ಟ್ರಗಳಿವೆ. ರೂಪಾಯಿ ಇಲ್ಲಿನ ನಾಣ್ಯ. ಶೇ.90ರಷ್ಟು ಮುಸ್ಲಿಮರಿರುವ ಈ ದೇಶದಲ್ಲಿ ಕ್ರಿಸ್ತರು, ಬುದ್ಧ ಹಾಗೂ ಹಿಂದೂ ಧರ್ಮಿಯರು ವಾಸಿಸುತ್ತಿದ್ದಾರೆ.

ಇತಿಹಾಸ:

ಕ್ರಿ.ಶ. 7ನೇ ಶತಮಾನದಲ್ಲಿ ಇಂಡೋನೇಶ್ಯ ಒಂದು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿಯ ಜನರು ಭಾರತ ಹಾಗೂ ಚೀನದೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿತ್ತು. ಇದರ ಪರಿಣಾಮವಾಗಿ ಭಾರತದ ಸಂಸ್ಕೃತಿಯು ಇಂಡೋನೇಶ್ಯದೊಂದಿಗೆ ಸೇರಿಕೊಂಡವು. ಭಾರತೀಯ  ಮೂಲದ ಹಿಂದೂ-ಬುದ್ದ ಧರ್ಮಿರು ಇಲ್ಲಿನ ಮೊದಲ ವಲಸಿಗರು. 16ನೇ ಶತಮಾನದಲ್ಲಿ ಪೋರ್ಚುಗೀಸರು ಮತ್ತು 1602ರಲ್ಲಿ ಡಚ್ಚ್ ಈಸ್ಟ್ ಇಂಡಿಯಾ ಕಂಪೆನಿಯನ್ನು ಸ್ಥಾಪಿಸುವ ಮೂಲಕ ಡಚ್ಚರು ಇಲ್ಲಿ ತಮ್ಮ ಅಥಿಪತ್ಯವನ್ನು ಸ್ಥಾಪಿಸಿದರು. 1942ರಲ್ಲಿ ನಡೆದ ಜನಾಂಗೀಯ ಸಂಗ್ರಾಮದಲ್ಲಿ ವೇಳೆ ಡಚ್ಚರನ್ನು ಮಣಿಸಿ ಇಲ್ಲಿನ ಆಡಳಿತವನ್ನು ಜಪಾನ್ ವಶಪಡಿಸಿಕೊಂಡರು. 1945 ಆಗಸ್ಟ್ ೧೭ರಂದು  ಜನಾಂಗೀಯ ನೇತಾರ  ಸುಕೋರ್ನೋ ರವರ ನಾಯಕತ್ವದಲ್ಲಿ (ಪೂರ್ವ  ತಿಮೂರ್ ಹೊರತುಪಡಿಸಿ) ಸ್ವಾತಂತ್ರವನ್ನು ಘೋಷಿಸಲಾಯಿತು.  ಆದರೆ 3 ವರ್ಷಗಳ ನಂತರ ಡಚ್ಚರು ಎರಡನೇ ಭಾರಿ ದಂಡೆತ್ತಿ ಬಂದರೂ ಸ್ವದೇಶಿಯರ ಭಾರೀ ಪ್ರತಿರೋಧದ ಹಿನ್ನೆಲೆಯಲ್ಲಿ ಅವರಿಗೆ ಇಲ್ಲಿ ನೆಲೆಕಂಡುಕೊಳ್ಳಲು ಸಾಧ್ಯವಾಗಲಿಲ್ಲ.  ಸೋಕೋರ್ನೋ ಅವರೇ ಇಂಡೋನೇಶ್ಯಾದ ಮೊಲದ ಅಧ್ಯಕ್ಷರು. (1945ರಿಂದ 1967ರವರೆಗೆ) 1990ರಲ್ಲಿ ಏಷ್ಯಾದ್ಯಂತ ಎದುರಾದ ಆರ್ಥಿಕ ಬಿಕ್ಕಟ್ಟು ಇಂಡೋನೇಶ್ಯದ ಮೇಲೆ ಭಾರೀ ಪರಿಣಾಮವನ್ನು ಬೀರಿತು. ಅಂದಿನ ಸರ್ಕಾರವು ಪಥನಗೊಳ್ಳುವುದರ ಮೂಲಕ ಜನಕ್ರೋಶವು ಅಂತ್ಯಗೊಂಡವು.‘

ಧಾರ್ಮಿಕ ಕ್ಷೇತ್ರ:

ಹದಿನಾಲ್ಕನೇ ಶತಮಾನದ ಮಧ್ಯಭಾಗದಲ್ಲಿ ಗುಜರಾತಿನ ವ್ಯಾಪಾರಿಗಳ ಮೂಲಕ  ಇಂಡೋನೇಶ್ಯಕ್ಕೆ ಮೊದಲನೆಯದಾಗಿ ಇಸ್ಲಾಂ ಧರ್ಮದ ಸಂದೇಶ ತಲುಪಿತು.  16ನೇ ಶತಮಾನದ ವೇಳೆ ಇಲ್ಲಿನ ಮುಸ್ಲಿಂ ಜನಸಂಖ್ಯೆಯು ಹಿಂದೂ-ಬುದ್ಧ ಜನಸಂಖ್ಯೆಗಿಂತಲೂ ಅಧಿಕವಾಯಿತು. ಇಂದು ಜಗತ್ತಿನಲ್ಲಿ ಅತ್ಯಧಿಕ ಮುಸ್ಲಿಮರು ವಾಸಿಸುವುದು ಈ ದೇಶದಲ್ಲಾಗಿದೆ.

ರಾಜಕೀಯ ಕ್ಷೇತ್ರ:

ವಿದೇಶಯರ ಆಧಿಪತ್ಯದಿಂದ ದೇಶವು 1945ಲ್ಲಿ ಸ್ವಾಂತಂತ್ರ್ಯ ಹೊಂದಿದರೂ ಕೂಡ ನಂತರ ಇಲ್ಲಿ ಭಾರೀ ಪ್ರಮಾಣದಲ್ಲಿ ಅರಾಜಕತ್ವ ಮತ್ತು ಅಧಾರ್ಮಿಕತೆ ನೆಲೆಗೊಂಡವು. ಪ್ರಥಮ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸುಕೋರ್ನೋ ಅವರು ಸರ್ವಾಧಿಕಾರಿಯಾಗಿ ಅಡಳಿತವನ್ನು ನಡೆಸಿದರು. 20 ವರ್ಷಗಳ ಸುಧೀರ್ಘವಾದ ಈ ಆಡಳಿತವು ಅಂತ್ಯಗೊಂಡಾಗ ಕಮ್ಯುನಿಷ್ಟರು ಸೇರಿದಂತೆ ಹಲವರು ಇಲ್ಲಿ ಅಧಿಕಾರಕಾರವನ್ನು ವಶಪಡಿಸಿಕೊಳ್ಳು ಪ್ರಯತ್ನ ನಡೆಸಿದರು. 1966ರರಿಂದ 1970ರವರೆಗೆ ಅಡಳಿತ ನಡೆಸಿದ ಸುಹರ್ ತೋಯ್ ಹಾಗೂ ನಂತರ ಜಗತ್ಪಸಿದ್ದರಾದ ಅಬ್ದುಲ್ ರಹ್ಮಾನ್ ವಾಹಿದ್ ಸೇರಿದಂತೆ ಜಾಗತಿಕ ನಾಯಕರು ಇಲ್ಲಿನ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದವರಾಗಿದ್ದಾರೆ.. 1999ರಲ್ಲಿ ಪೂರ್ವ ತಿಮೂರ್ ಇಂಡೋನೇಶಿಯಾದಿಂದ ಸಂಪೂರ್ಣವಾಗಿ ವಿಭಜನೆಗೊಂಡ ನಂತರ ಇಲ್ಲಿ ಪ್ರಜಾಪ್ರಭುತ್ವ ರೀತಿಯ ಅಡಳಿತ ವ್ಯವಸ್ಥೆ ಜಾರಿಗೆ ಬಂತು. ಅಧ್ಯಕ್ಷರಾದವರು ರಾಷ್ಟ್ರದ ಅತ್ಯುನ್ನತ ವ್ಯಕ್ತಿ ಹಾಗೂ ಅಡಳಿತಕಾರನಾಗಿರುತ್ತಾನೆ. ಪೀಪಲ್ಸ್ ಕನ್ಸಲ್ಟೀವ್ ಅಸ್ಸೆಂಬ್ಲಿ ಎಂಬ ಜನತಂತ್ರ ಸಂಸ್ಥೆಯು ಐದು ವರ್ಷಕ್ಕೊಮ್ಮೆ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.

ಇದನ್ನೂ ಓದಿ