Mon. May 20th, 2024

ನಾಸ್ತಿಕ ನಾಡಿನಲ್ಲಿ ಇಸ್ಲಾಮಿನ ನಾಗಾಲೋಟ

ರಮಝಾನ್ ಬಂತೆಂದರೆ ಸಾಕು, ಚೀನಾ ಮುಸ್ಲಿಮರು ಜಾಗತಿಕ ಮಟ್ಟದಲ್ಲೇ ಭಾರೀ ಚರ್ಚೆಗೊಳಗಾಗುತ್ತಾರೆ. ಉಪವಾಸಕ್ಕೆ ನಿಷೇಧ, ಧಾರ್ಮಿಕ ಚಟುವಟಿಕೆಗಳಿಗೆ ಕಡಿವಾಣ, ಮುಸ್ಲಿಮರ ಮೇಲೆ ದೌರ್ಜನ್ಯ… ಹೀಗೆ ನಾನ ರೀತಿಯ ಸುದ್ದಿಗಳು ನಮ್ಮ ಮಾಧ್ಯಮಗಳಲ್ಲಿ ರಾರಾಜಿಸಲಾರಂಭಿಸುತ್ತದೆ. ಇಂತಹ ವರದಿಗಳನ್ನು ನೋಡುವಾಗ ನಿಜಕ್ಕೂ ಚಿನಾದಲ್ಲಿ ಇಸ್ಲಾಂ ಧರ್ಮವು ಅಥಪತನದ ಹಾದಿ ಹಿಡಿಯುತ್ತಿದೆ ಎಂದು ಜನಸಾಮಾನ್ಯರು ಭಾವಿಸದೇ ಇರಲಾರರು. ಆದರೆ ವಾಸ್ತವದಲ್ಲಿ ಚೀನಾದಲ್ಲಿ ಮುಸ್ಲಿಮರ ಹಾಗೂ ಅಲ್ಲಿನ ಇಸ್ಲಾಮಿಕ್ ಚಟುವಟಿಕೆಗಳು ಸ್ಥಿತಿಗತಿಗಳೇ ಬೇರೆಯೇ ಆಗಿದ್ದು, ಅವುಗಳ ಕುರಿತಾದ ಕೆಲವೊಂದು ಮಾಹಿತಿಗಳು ನಮಗೆ ಲಭ್ಯವಾಗುತ್ತಲಿದೆ.

ಸಾಂಸ್ಕೃತಿಕ ಜೀವನದ ದೃಷ್ಟಿಕೋನದಲ್ಲಿ ಚೀನಾದ ಮುಸ್ಲಿಮರು ಇತರ ದೇಶಗಳ ಮುಸ್ಲಿಮರಿಗಿಂತಲೂ ಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುವುದೇ ಅಲ್ಲಿನ ವಿಶೇಷತೆಯಾಗಿದೆ. ಚೀನಾದ ಇಸ್ಲಾಮಿಕ್ ಪ್ರಚಾರ ಕಾರ್ಯಗಳಿಗೆ ಮುಂದಾಳುತ್ವ ನೀಡುವುದು ಇರಾನಿನ ಮಿಶನರಿಗಳಾಗಿದ್ದು, ಚೈನೀಸ್ ಮುಸಲ್ಮಾನರ ಸಂಭಾಷಣೆಗಳಲ್ಲಿ ಹಾಗೂ ದಿನನಿತ್ಯದ ಚಟುವಟಿಕೆಗಳಲ್ಲಿ ಪರ್ಶಿಯನ್ ಭಾಷೆಯ ಪ್ರಭಾವವಿರುವುದೇ ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಚೀನಾದ ಸರಕಾರಿ ಲೆಕ್ಕಾಚಾರಗಳ ಪ್ರಕಾರ, ಅಲ್ಲಿನ ಮುಸ್ಲಿಮರ ಜನಸಂಖ್ಯೆಯು ೧೮ ಮಿಲಿಯನ್ ಆಗಿದೆ. ವಾಸ್ತವದಲ್ಲಿ ಇದು ನಲುವತ್ತು-ಎಪ್ಪತ್ತು ಮಿಲಿಯನ್‌ನಷ್ಟು ಇರಬಹುದೆಂದು ಅಂದಾಜಿಸಲಾಗುತ್ತಿದೆ. 34 ಸಾವಿರದಷ್ಟು ಮಸೀದಿಗಳು ಚೀನಾದಲ್ಲಿ ಕಾರ್ಯಾಚರಿಸುತ್ತಿದೆ. ಅವುಗಳ ಪೈಕಿ ಕೆಲವೊಂದು ಮಸೀದಿಗಳಿಗೆ ಇನ್ನೂರು ವರ್ಷಗಳಷ್ಟು ಇತಿಹಾಸವಿದೆ ಎಂದು ನಂಬಲಾಗಿದೆ.

ಚೀನಾದ ಮುಸ್ಲಿಮರು ಪ್ರಧಾನವಾಗಿ ಎರಡು ವಿಭಾಗಗಳಾಗಿ ಗುರುತಿಸಲ್ಪಟ್ಟಿದ್ದಾರೆ. ಒಂದು, ಅಯೋಗೋಸ್ (ಅಯೋಗರ್) ವಿಭಾಗ. ಇವರ ಭಾಷೆ ಅರಬಿಕ್, ಪೇರ್ಶಿಯನ್‌ಗಳಾಗಳಿವೆ. ಸಿಂಕಿಯಾಂಗ್ ರಾಜ್ಯದಲ್ಲಿ ಇವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಎರಡನೆಯದು, ‘ಹೂಯಿ’ ವಿಭಾಗವಾಗಿದೆ. ಇವರು ಮುಖ್ಯವಾಗಿ ಚೈನೀಸ್ ಭಾಷೆ ಹಾಗೂ ಅರಬಿಕ್, ಪೇರ್ಶಿಯನ್ ಭಾಷೆಗಳನ್ನು ಬಳಸುತ್ತಾರೆ. ಈ ವಿಭಾಗವು ಚೀನಾದಾದ್ಯಂತ ವ್ಯಾಪಿಸಿಕೊಂಡಿದೆ.

“ಇಸ್ಲಾಮ್ ಯುವ ತಲೆಮಾರಿನ ಅನುಯಾಯಿಗಳನ್ನು ಹೊಂದಿದೆ” ಎಂದು ರೆನ್‌ಮಿನ್‌ನ ತತ್ವಶಾಸ್ತ್ರ ಅಧ್ಯಯನ ಕೇಂದ್ರದ ಬೌದ್ಧ ಅಧ್ಯಯನಗಳ ಪ್ರೊಫೆಸರ್ ವೀ ಡೆಡಾಂಗ್ ಎಂದು ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ಗೆ ಹೇಳಿದ್ದರು. ಒಟ್ಟಿನಲ್ಲಿ ಚೀನಾದಲ್ಲಿ ಮುಸ್ಲಿಮರ ಭವಿಷ್ಯವು ಭದ್ರವಾಗಿದೆ.

ಇಸ್ಲಾಂ ಇತರ ಧರ್ಮಗಳಿಗಿಂತಲೂ ಭಿನ್ನವಾಗಿ ಚೀನಾದಲ್ಲಿ ಬೆಳೆಯುತ್ತಿದೆ. ಅದರ ಮೂಲಭೂತ ಹಾಗೂ ತಾತ್ವಿಕ ಸಿದ್ದಾಂತಗಳಲ್ಲಿ ಯಾವುದೇ ಬದಲಾವಣೆಗಳುಂಟಾಗದೆ ಚೀನಾದ ಸಂಸ್ಕೃತಿಗಳೊಂದಿಗೆ ಹೊಂದಿಕೊಂಡು ಹೋಗುತ್ತಿದೆ. ‘ಟಾಂಗ್’ ಆಡಳಿತಾವಧಿಯಲ್ಲಿ ಬಂದ ಮಾನಾವಿ ಧರ್ಮ, ಕ್ರಿಶ್ಚಿಯನಿಸಂ, ಯಹೂದಿಸಂ, ಸೊರೋಟ್ರೀನಿಸಂ ಮುಂತಾದ ಧರ್ಮಗಳೆಲ್ಲವೂ ಕೆಲವೇ ಶತಮಾನಗಳೊಳಗಾಗಿ ದಿವಾಳಿತನದ ಹಾದಿ ಹಿಡಿಯಿತು. ಚೀನಾದ ಪರಂಪರಾಗತ ಸಂಸ್ಕೃತಿಯೊಂದಿಗೆ ಹೊಂದಿಕೊಂಡು ಹೋಗಲು ಸಾಧ್ಯವಾಗಲಿಲ್ಲ ಎಂಬುವುದೇ ಅವುಗಳ ಪತನಕ್ಕೆ ಕಾರಣ. ಆದರೆ ಚೈನೀಸ್ ಸಮಾಜದಿಂದ ಶಿಕ್ಷಣ ಪಡೆದ ಮುಸ್ಲಿಮ್ ವಿದ್ವಾಂಸರು, ಕನ್‌ಫ್ಯೂಶಸ್‌ನ ಮಾನವ ಕರುಣೆಯ ಐದು ಮೂಲ ಸಿದ್ಧಾಂತಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಪ್ರಭಾವಕ್ಕೊಳಗಾಗಿದ್ದಾರೆ. ಅಲ್ಲದೆ ಮುಸ್ಲಿಮರೆಡೆಯಲ್ಲಿ ತನ್ನ ಸಂಬಂದಿಕರ ಐದು ತಲೆಮಾರುಗಳಲ್ಲೊಳಪಟ್ಟ ಯಾರನ್ನು ವಿವಾಹವಾಗುವುದಿಲ್ಲ ಎಂಬ ಸಂಪ್ರದಾಯವಿದೆ. ಹೀಗೆ ವಿವಿಧ ವಿಷಯಗಳಲ್ಲಾಗಿ ಜಾಗತಿಕ ಮುಸ್ಲಿಮರಿಂದ ಅಲ್ಲಿನ ಮುಸ್ಲಿಮರು ಬೇರ್ಪಟ್ಟು ನಿಂತಿದ್ದಾರೆ. ಚೀನಾದ ಕರವಿರುದ್‌ನಲ್ಲಿ ನಿರ್ಮಿಸಿರುವ ಮಸೀದಿಯ ಆವರಣದಲ್ಲಿ ಪ್ರಾಣಿಗಳ ಪ್ರತಿಮೆಯನ್ನೂ ಕಾಣಲು ಸಾಧ್ಯ. ಚೀನಾ ಸಂಸ್ಕೃತಿಯಲ್ಲಿ ಪಿಶಾಚಿಯನ್ನು ಓಡಿಸಲು ಹಾಗೂ ಸೌಭಾಗ್ಯ ಲಭಿಸಲು ಒಂದು ಉಪಕರಣವಾಗಿ ಅದನ್ನು ಅವರು ನಂಬಿದ್ದಾರೆ. ಆರೋಗ್ಯ, ಆಯಸ್ಸು, ಸೌಭಾಗ್ಯ ಇತ್ಯಾದಿಗಳ ಪ್ರತೀಕವಾಗಿ ಪರಿಗಣಿಸಲ್ಪಡುವ ಚೈನೀಸ್ ಶಾಸನಗಳನ್ನೊಳಗೊಂಡ ಮಾರ್ಬಲ್‌ಗಳಿಂದ ಮಸೀದಿಯನ್ನು ನಿರ್ಮಿಸಲಾಗಿದೆ.

ಬೀಜಿಂಗ್‌ನ ಮುಸ್ಲಿಮರು:

ಬೀಜಿಂಗ್‌ಗೆ ಇಸ್ಲಾಂ ಯಾವಾಗ ತಲುಪಿದೆ ಎಂಬುವುದು ಇನ್ನೂ ಸ್ಪಷ್ಟವಿಲ್ಲ. ಒಂದು ಅಭಿಪ್ರಾಯದ ಪ್ರಕಾರ ‘ಲಿಯಾವ್’ ಆಡಳಿತಾವಧಿಯಲ್ಲಿ ‘ನಿಯೋಜಿಯಾ’ ಮಸೀದಿಯ ನಿರ್ಮಾಣಗೊಂಡಿರುವುದರಿಂದ ಆ ಕಾಲದಲ್ಲಿ ಇಸ್ಲಾಮಿನ ಆಗಮನವಾಗಿದೆ ಎಂದು ಭಾವಿಸಲಾಗುತ್ತಿದೆ. ಪಶ್ಚಿಮ ಭಾಗದಿಂದ ಶೈಖ್ ಗವಾಮುದ್ದೀನ್ ಚೀನಾಗೆ ತಲುಪಿದ್ದರು. ಸರಕಾರವು ಶೈಖ್‌ರ ಮಕ್ಕಳಿಗೆ ಉನ್ನತ ಸ್ಥಾನಮಾನಗಳನ್ನು ವಾಗ್ದಾನ ಮಾಡಿದ್ದರೂ ಕೂಡ ಶೈಖ್‌ರವರು ಅದನ್ನು ನಿರಾಕರಿಸಿದ್ದರು. ಅವರು ಮಸೀದಿಯಲ್ಲಿ ಇಮಾಮರಾಗಿ ಸೇವೆಗೈಯುತ್ತಾ, ಚೀನಾದಲ್ಲಿ ವಾಸ ಆರಂಭಿಸಿದರು. ತನ್ನ ದಅವಾ ಚಟುವಟಿಕೆಗಳಿಗೆ ಅತ್ಯಂತ ಪೂರಕವಾದ ಸ್ಥಳ ಬೀಜಿಂಗ್ ಎಂದು ಶೈಖ್ರ ಮಕ್ಕಳಾದ ಸಹ್‌ದುದ್ದೀನ್ ಹಾಗೂ ನರ್ಸುದ್ದೀನರು ಅರ್ಥಮಾಡಿಕೊಂಡಿದ್ದರು. ಹಾಗೆ ಅವರು ಮಸೀದಿಗಳನ್ನು ನಿರ್ಮಿಸಲು ಆಡಳಿತ ವರ್ಗದೊಂದಿಗೆ ಮನವಿ ಮಾಡಿ, ಅವರ ಅನುಮತಿಯೊಂದಿಗೆ ಸಹ್‌ದುದ್ದೀನ್ ‘ಸೋಗ್‌ಗೋ’ದಲ್ಲಿ ಒಂದು ಮಸೀದಿ ಹಾಗೂ ನರ್ಸುದ್ದೀನ್ ಅವರು ದಕ್ಷಿಣದ ಹೊರವಲಯದಲ್ಲಿ ಈಗಲೂ ನೆಲೆನಿಂತಿರುವ ‘ನಿಯೋಜಿಯಾ’ ಮಸೀದಿಯನ್ನು ನಿರ್ಮಿಸಿದರು. ಮಿಸ್. ಜಿಯೋಜಿಯಾನ್ ಕ್ರಿ.ಶ. ೧೨೫೯ರಲ್ಲಿ ಬರೆದ ಕೃತಿಯೊಂದರಲ್ಲಿ ೨,೫೯೩ರಷ್ಟು ಮುಸ್ಲಿಂ ಕುಟುಂಬಗಳು ಬೀಜಿಂಗ್‌ನಲ್ಲಿ ವಾಸವಿದ್ದಾರೆಂದು ಹೇಳಿದ್ದಾರೆ. ಪ್ರತಿಯೊಂದು ಕುಟುಂಬಗಳಲ್ಲಿ ಅಂದಾಜು ನಾಲ್ಕು ಮಂದಿಯಂತೆ ಲೆಕ್ಕಾಚಾರ ಹಾಕಿ ನೋಡಿದರೆ, ಬೀಜಿಂಗ್‌ನಲ್ಲಿ ೧೦,೩೭೨ರಷ್ಟು ಮುಸ್ಲಿಮರು ವಾಸವಿದ್ದರು ಎಂದು ಅಂದಾಜಿಸಬಹುದಾಗಿದೆ. ‘ಯಾನ್’ ನ ಆಡಳಿತದ ಕಾಲದ್ದೆಂದು ಭಾವಿಸಲಾಗುತ್ತಿರುವ ಕಲ್ಲುಗಳಿಂದ ನಿರ್ಮಿಸಿದ ಪುರಾತನ ಎರಡು ಮಸೀದಿಗಳನ್ನು ಪತ್ತೆಹಚ್ಚಲಾಗಿದೆ. ಕ್ರಿ.ಶ. ೧೨೮೦ರಲ್ಲಿ ನಿಧನರಾದ ಮದೀನಾ ಸ್ವದೇಶಿ ಮುಹಮ್ಮದ್ ಬಿನ್ ಅಹ್ಮದ್ ಮತ್ತು ೧೨೮೩ರಲ್ಲಿ ನಿಧನರಾದ ಬಚ್ಚರಾಯ ಸ್ವದೇಶಿಯಾಗಿದ್ದ ಗವಾಮುದ್ದೀನರು ಇಲ್ಲಿ ಜನಿಸಿದ ಇಸ್ಲಾಮಿಕ್ ವಿದ್ವಾಂಸರ ಪೈಕಿ ಪ್ರಮುಖರಾಗಿದ್ದಾರೆ.

‘ಮಿಂಗ್’ ಹಾಗೂ ಚಂಗ್ ರವರ ಆಡಳಿತವು ಚೀನಾದ ಇತಿಹಾಸದಲ್ಲೇ ಸರ್ವಾಧಿಕಾರದ ಕಾಲಘಟ್ಟವಾಗಿತ್ತು. ಈ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಅಲ್ಪಸಂಖ್ಯಾತರು ಆಥಪತದತ್ತ ಹೋಯಿತು. ಅಲ್ಲದೆ ಇಸ್ಲಾಮಿಕ್ ಸಂಸ್ಕೃತಿಯು ಸಾರ್ವಜನಿಕ ಸಂಸ್ಕೃತಿಯೊಂದಿಗೆ ವಿಲೀನವಾಗಿ ಹೋದವು. ಮುಸ್ಲಿಂ ವಿದ್ವಾಂಸರ, ಇಸ್ಲಾಮಿಕ್ ನಾಗರೀಕತೆಯ ಹಾಗೂ ‘ಹೂಹಿ’ ಮುಸ್ಲಿಮರ ಬಿಕ್ಕಟ್ಟಿನ ಈ ಕಾಲಾವಧಿಯಲ್ಲಿ, ಅವುಗಳೆಲ್ಲವನ್ನೂ ಹಿಂದಿಕ್ಕಿ ಚೀನಾದಲ್ಲಿ ಮಸೀದಿಗಳ ಮೂಲಕ ವಿದ್ಯಾಭ್ಯಾಸ ನೀಡುವ ಪದ್ಧತಿಗೆ ನಾಂದಿ ಹಾಡಲಾಯಿತು.

1979ರಲ್ಲಿ ಬೀಜಿಂಗ್‌ನಲ್ಲಿ ಪ್ರಥಮ ಬಾರಿಗೆ ನಡೆದ ಪ್ರಾದೇಶಿಕ ಮುಸ್ಲಿಮರ ಸಮ್ಮೇಳನದಲ್ಲಿ ಇಸ್ಲಾಮಿಕ್ ಚಟುವಟಿಕೆಗಳಿಗೆ ಸಣ್ಣಮಟ್ಟಿನ ಯೋಜನೆಗಳನ್ನು ಹುಟ್ಟು ಹಾಕಲಾಗಿತ್ತ್ತು. ಬೀಜಿಂಗ್‌ನಲ್ಲಿ ವಾಸವಿರುವ ೨ ಲಕ್ಷದಷ್ಟು ಮುಸ್ಲಿಮರು ಇದರಲ್ಲಿ ಸದಸ್ಯರಾಗಿದ್ದಾರೆ. ಈ ಸಂಘಟನೆಯು ಮುಸ್ಲಿಮರ ಕಾನೂನಾತ್ಮಕ ಹಕ್ಕುಗಳನ್ನು ಅವಲಂಬಿಸುತ್ತದೆ. ಸಾಂಸ್ಕೃತಿಕ ಕ್ರಾಂತಿಯಿಂದಾಗಿ ಅಲ್ಲಿನ ಸರಕಾರದಿಂದ ಮುಸ್ಲಿಮರಿಗುಂಟಾದ ನಷ್ಟವನ್ನು ಸರಕಾರದಿಂದಲೇ ಪರಿಹರಿಸಲು ಮುತುವರ್ಜಿ ವಹಿಸಿದ್ದರಿಂದ ಈ ಸಂಘಟನೆಗೆ ಮುಸ್ಲಿಮರೆಡೆಯಲ್ಲಿ ಹೆಚ್ಚಿನ ಮಾನ್ಯತೆ ದೊರಕಲು ಕಾರಣವಾಯಿತು. ಇದೀಗ ಬೀಜಿಂಗ್‌ನಲ್ಲಿ ೭೦ರಷ್ಟು ಮಸೀದಿಗಳು ಹಾಗೂ ಮುಸ್ಲಿಮರ ದೈನಂದಿನ ಸಮಸ್ಯಗಳಲ್ಲೂ, ಚಟುವಟಿಕೆಗಳಲ್ಲೂ ಭಾಗಿಯಾಗುತ್ತಿರುವ ೧೨೦ರಷ್ಟೂ ವಿದ್ವಾಂಸರುಗಳಿದ್ದಾರೆ. ಇಸ್ಲಾಮಿನ ಗಂಭೀರ ಬೆಳವಣಿಗೆ, ಮುಸ್ಲಿಮರ ಮಧ್ಯಸ್ಥಿಕೆ ಹಾಗೂ ಚಟುವಟಿಕೆಗಳೆಲ್ಲವೂ ಇಸ್ಲಾಮಿನ ನವ ಜಾಗೃತಿಯನ್ನು ಪ್ರತಿಬಿಂಬಿಸುತ್ತಿದೆ.

ಚೀನಾದಲ್ಲಿ ಮುಸ್ಲಿಂ ಮಹಿಳೆಯರ ಉಪಸ್ಥಿತಿಯು ಪ್ರತ್ಯೆಕವಾಗಿ ಪರಿಗಣಿಸುವಂತಹದ್ದೇ ಆಗಿದೆ. ೧೯೮೦ ಇಸವಿಯಲ್ಲಿ ಮಹಿಳೆಯರಿಗಾಗಿ ದಾರ್ಮಿಕ ವಿದ್ಯಾಭ್ಯಾಸ ಕೇಂದ್ರಗಳು ಹುಟ್ಟಿಕೊಂಡು, ನೈರುತ್ಯ ಪ್ರಾತ್ಯಗಳಲ್ಲಿ ಅದು ವ್ಯಾಪಕಗೊಂಡಿದ್ದವು. ಅಲ್ಲದೆ ಶೈಕ್ಷಣಿಕ ಕೋರ್ಸ್‌ಗಳು, ಅರಬಿಕ್, ಚೈನೀಸ್‌ಗಳನ್ನೊಳಗೊಂಡ ಭಾಷೆಗಳನ್ನು ಕಲಿಸಲಿಕ್ಕೋಸ್ಕರ ಪ್ರತ್ಯೇಕ ಶಾಲೆಗಳು ಕೂಡ ಅವರಿಗಿದೆ. ಮಾರಿಯಾ ಜಾಸ್ ಚೋಕ್ ಮತ್ತು ಸೂಹಿ ಜಿಂಗ್‌ಜಾನು ಜೊತೆಯಾಗಿ ಬರೆದ “ದಿ ವುಮೆನ್ಸ್ ಮಾಸ್ಕ್‌ಸ್ ನ್ ಚೈನೀಸ್ ಇಸ್ಲಾಂ” ಎಂಬ ಕೃತಿಯು ಚೀನಾದಲ್ಲಿ ಮುಸ್ಲಿಮರ ಶೈಕ್ಷಣಿಕ ಪ್ರಗತಿಯ ಇತಿಹಾಸವನ್ನು ಉಲ್ಲೇಖಿಸುತ್ತದೆ.

‘ಮಿಂಗ್’ ಹಾಗೂ ಚಂಗ್ ರವರ ಆಡಳಿತವು ಚೀನಾದ ಇತಿಹಾಸದಲ್ಲೇ ಸರ್ವಾಧಿಕಾರದ ಕಾಲಘಟ್ಟವಾಗಿತ್ತು. ಈ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಅಲ್ಪಸಂಖ್ಯಾತರು ಆಥಪತದತ್ತ ಹೋಯಿತು. ಅಲ್ಲದೆ ಇಸ್ಲಾಮಿಕ್ ಸಂಸ್ಕೃತಿಯು ಸಾರ್ವಜನಿಕ ಸಂಸ್ಕೃತಿಯೊಂದಿಗೆ ವಿಲೀನವಾಗಿ ಹೋದವು. ಮುಸ್ಲಿಂ ವಿದ್ವಾಂಸರ, ಇಸ್ಲಾಮಿಕ್ ನಾಗರೀಕತೆಯ ಹಾಗೂ ‘ಹೂಹಿ’ ಮುಸ್ಲಿಮರ ಬಿಕ್ಕಟ್ಟಿನ ಈ ಕಾಲಾವಧಿಯಲ್ಲಿ, ಅವುಗಳೆಲ್ಲವನ್ನೂ ಹಿಂದಿಕ್ಕಿ ಚೀನಾದಲ್ಲಿ ಮಸೀದಿಗಳ ಮೂಲಕ ವಿದ್ಯಾಭ್ಯಾಸ ನೀಡುವ ಪದ್ಧತಿಗೆ ನಾಂದಿ ಹಾಡಲಾಯಿತು. ಚೀನಾದ ಇಸ್ಲಾಮಿಕ್ ಇತಿಹಾಸದಲ್ಲಿ ಮುಖ್ಯ ಸಾಧನೆಯೆಂದರೆ ಮಸೀದಿಗಳ ಮೂಲಕ ನೀಡಲಾಗುವ ಶಿಕ್ಷಣ ಪದ್ಧತೆ ಎಂದೇ ಹೇಳಲಾಗುತ್ತಿದೆ. ‘ಲಾಂಜೂ’ ನಗರದ ಬಹುತೆಕ ಮಸೀದಿಗಲ್ಲಿ ಶಿಕ್ಷಣ ಪದ್ದತಿ ಜಾರಿಯಲ್ಲಿದೆ. ೪೦-೫೦ ವಯಸ್ಸಿನ ತಾಯಂದಿರಿರಿಗಾಗಿ ಮೂರು ವರ್ಷದ ಕೋರ್ಸ್ ನೀಡಲಾಗುತ್ತಿದೆ. ಪೌಢ ಶಿಕ್ಷಣ ಮುಗಿಸಿದ ೧೬-೨೦ ವಯಸ್ಸಿನ ಮಹಿಳೆಯರಿಗಾಗಿ ಮೂರು ವರ್ಷದ ಕೋರ್ಸ್ ಇದೆ. ಶಾಲೆ ಹೋಗುವ ವಿದ್ಯಾರ್ಥಿಗಳಿಗೂ ಪೋಷಕರಿಗೂ ಪ್ರತ್ಯೇಕ ಕೋರ್ಸ್ ಕಲಿಸಲಾಗುತ್ತಿದೆ. ಪ್ರಧಾನ ವಿಷಯಗಳಾದ ಇಸ್ಲಾಮಿಕ್ ಜೊತೆಗೆ ಚೈನೀಸ್ ಭಾಷೆಗಳು, ಕಂಪ್ಯೂಟರ್ ಶಿಕ್ಷಣದ ಪರಿಜ್ಞಾನವನ್ನು ನೀಡಲಾಗುತ್ತಿದೆ.

ಇಸ್ಲಾಮಿನತ್ತ ಯುವ ಜನತೆ:

ಬೀಜಿಂಗ್‌ನ ರೆನ್‌ಮಿನ್ ವಿಶ್ವವಿದ್ಯಾನಿಲಯದಲ್ಲಿರುವ ರಾಷ್ಟ್ರೀಯ ಸಮೀಕ್ಷೆ ಸಂಶೋಧನಾ ಕೇಂದ್ರ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ಚೀನಾದಲ್ಲಿ ಧರ್ಮವನ್ನು ಅನುಸರಿಸುತ್ತಿರುವವರ ಪೈಕಿ ಹೆಚ್ಚಿನವರು ಎಳೆಯರು ಹಾಗೂ ಇಸ್ಲಾಮ್‌ನ ಹೆಚ್ಚಿನ ಅನುಯಾಯಿಗಳು ೩೦ ವರ್ಷಕ್ಕಿಂತ ಕೆಳಗಿನವರು ಎಂಬುದಾಗಿ ‘ಇಂಟರ್‌ನ್ಯಾಶನಲ್ ಬಿಸಿನೆಸ್ ಟೈಮ್ಸ್’ ಪತ್ರಿಕೆಯು ಇತ್ತೀಚೆಗೆ ವರದಿ ಮಾಡಿತ್ತು.

ಚೀನಾದಲ್ಲಿ ಆಡಳಿತ ನಡೆಸುತ್ತಿರುವುದು ಅಧಿಕೃತವಾಗಿ ನಾಸ್ತಿಕವಾದಿಗಳಾಗಿರುವ ಕಮ್ಯೂನಿಸ್ಟ್ ಪಕ್ಷವಾದರೂ, ದೇಶದ ಯುವ ಜನಾಂಗದಲ್ಲಿ ಧರ್ಮದ ಬಗ್ಗೆ ಒಲವು ಹೆಚ್ಚುತ್ತಿದೆ. ಚೀನಾ ಕೇವಲ ಐದು ಧರ್ಮಗಳನ್ನು ಅಂಗೀಕರಿಸುತ್ತದೆ. ಅವುಗಳೆಂದರೆ ಬೌದ್ಧ ಧರ್ಮ, ತಾವೋ ಧರ್ಮ, ಕೆಥೊಲಿಕ್, ಪ್ರೊಟೆಸ್ಟೆಂಟ್ ಮತ್ತು ಇಸ್ಲಾಮ್. ಇಸ್ಲಾಮ್ ಧರ್ಮ ಅತ್ಯಂತ ಹೆಚ್ಚಿನ ಯುವ ಅನುಯಾಯಿಗಳನ್ನು ಹೊಂದಿದೆ. ವಾರ್ಷಿಕ ಚೀನಾ ಧರ್ಮ ಸಮೀಕ್ಷೆಗಾಗಿ ಸಂದರ್ಶನ ನಡೆಸಲಾದವರ ಪೈಕಿ ೨೨.೪ ಶೇ. ಇಸ್ಲಾಮ್‌ನ ಅನುಯಾಯಿಗಳಾಗಿದ್ದಾರೆ. “ಇಸ್ಲಾಮ್ ಯುವ ತಲೆಮಾರಿನ ಅನುಯಾಯಿಗಳನ್ನು ಹೊಂದಿದೆ” ಎಂದು ರೆನ್‌ಮಿನ್‌ನ ತತ್ವಶಾಸ್ತ್ರ ಅಧ್ಯಯನ ಕೇಂದ್ರದ ಬೌದ್ಧ ಅಧ್ಯಯನಗಳ ಪ್ರೊಫೆಸರ್ ವೀ ಡೆಡಾಂಗ್ ಎಂದು ಸರಕಾರಿ ಒಡೆತನದ ‘ಗ್ಲೋಬಲ್ ಟೈಮ್ಸ್’ಗೆ ಹೇಳಿದ್ದರು. ಒಟ್ಟಿನಲ್ಲಿ ಚೀನಾದಲ್ಲಿ ಮುಸ್ಲಿಮರ ಭವಿಷ್ಯವು ಭದ್ರವಾಗಿದೆ.

ಇದನ್ನೂ ಓದಿ