Fri. Jan 10th, 2025

ಖರ್ಜೂರ ಸೇವನೆ ಆರೋಗ್ಯ ಖಚಿತ..! ಆಯುಷ್ಯ ಉಚಿತ…!!

ಡ್ರೈಫ್ರುಟ್‌ಗಳು ನಮ್ಮ ದೈನಂದಿನ ಆಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳಲ್ಲಿರುವ ವಿಟಮಿನ್ ಮತ್ತು ಮಿನರಲ್‌ಗಳು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅತ್ಯವಶ್ಯಕವಾದುದು.ಡ್ರೈ ಫ್ರುಟ್‌ಗಳನ್ನು ಪ್ರಯಾಣದ ಸಮಯದಲ್ಲಿ ಕಚೇರಿಯ ಸಮಯದಲ್ಲಿ ಹೀಗೆ ಎಲ್ಲೆಂದರಲ್ಲಿ ಹಸಿವಾದಾಗ ನಮಗೆ ಸೇವಿಸಬಹುದು.

  • ಖರ್ಜೂರ ಕೊಲೆಸ್ಟ್ರಾಲ್ ಮುಕ್ತವಾಗಿದ್ದು ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ.ಇವುಗಳಲ್ಲಿ ವಿಟಮಿನ್ ಮಿನರಲ್ ಅಧಿಕವಾಗಿದೆ ಎಂಬುದು ಸುಳ್ಳಲ್ಲ.
  • ಪ್ರೋಟೀನ್, ಜೀರ್ಣಕ್ರಿಯೆಗೆ ಸಹಾಯಕವಾಗುವ ಫೈಬರ್ ಮತ್ತು ವಿಟಮಿನ್ ಬಿ1, ಬಿ2, ಬಿ3 ಮತ್ತು ಬಿ5 ಅಲ್ಲದೆ ವಿಟಮಿನ್ ಎ1 ಮತ್ತು ಸಿ ಯಿಂದ ಸಮೃದ್ಧಗೊಂಡಿದೆ.
  • ಕರಗುವ ಮತ್ತು ಕರಗದ ಫೈಬರ್‌ಗಳು ಹಾಗೂ ವಿವಿಧ ಪ್ರಕಾರದ ಅಮೀನೊ ಏಸಿಡ್ ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಜೀರ್ಣಿಸಲು ಖರ್ಜೂರ ಸಹಾಯ ಮಾಡುತ್ತದೆ.
  • ನೈಸರ್ಗಿಕ ಸಕ್ಕರೆಯಾದ ಗ್ಲುಕೋಸ್, ಸುಕ್ರೋಸ್ ಮತ್ತು ಫ್ರುಕ್ಟೋಸ್ ಅನ್ನು ಖರ್ಜೂರ ಒಳಗೊಂಡಿರುವುದರಿಂದ ಶಕ್ತಿ ವರ್ಧಕ ಡ್ರೈ ಫ್ರುಟ್ ಇದಾಗಿದೆ. ಖರ್ಜೂರದಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಇದನ್ನು ಹಾಲಿನೊಂದಿಗೆ ಮಿಶ್ರ ಮಾಡಿಕೊಂಡು ಸೇವಿಸಬೇಕು.ಇದೊಂದು ಉತ್ತಮ ನ್ಯೂಟ್ರಿಶಿಯಸ್ ಬೆರೆತ ಪೇಯವಾಗಿದೆ.ಖರ್ಜೂರದಲ್ಲಿನ ಕ್ಯಾಲೋರಿ ಅಂಶ ಕಡಿಮೆ ಇದ್ದು ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸುವವರಿಗೆ ಹೆಚ್ಚು ಹೊಂದುವ ಹಣ್ಣಾಗಿದೆ.
  • ಪೊಟ್ಯಾಶಿಯಂ ಅಧಿಕವಾಗಿ ಮತ್ತು ಸೋಡಿಯಂ ಇಳಿಕೆಯಾಗಿರುವ ಖರ್ಜೂರ ಆರೋಗ್ಯಕರ ನರಮಂಡಲ ವ್ಯವಸ್ಥೆಗೆ ಕಾರಣವಾಗಿದೆ.ಪೊಟ್ಯಾಶಿಯಂ ಅನ್ನು ಅಧಿಕವಾಗಿ ಸೇವಿಸುವುದು ಕೆಲವೊಂದು ಸಂದರ್ಭಗಳಲ್ಲಿ ಪಾರ್ಶ್ವವಾಯುವಿನ ಕಬಂಧ ಮುಷ್ಟಿಯಿಂದ ದೇಹವನ್ನು ಕಾಪಾಡುತ್ತದೆ ಎಂಬ ಅಂಶ ಸಂಶೋಧನೆಯಿಂದ ತಿಳಿದುಬಂದಿದೆ.ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಖರ್ಜೂರ ಸಹಕಾರಿಯಾಗಿದೆ.
  • ಇದರಲ್ಲಿರುವ ಅತ್ಯಧಿಕ ಐರನ್ ಅಂಶ ಅನಿಮೀಯಾಕ್ಕೆ ಉತ್ತಮ ಔಷಧಿಯಾಗಿದೆ. ಈ ರೋಗಿಗಳು ಹೆಚ್ಚಿನ ಪ್ರಯೋಜನಕ್ಕಾಗಿ ಹೆಚ್ಚು ಖರ್ಜೂರವನ್ನು ಸೇವಿಸಬಹದು.ದಂತಕ್ಷಯದ ಪ್ರಕ್ರಿಯೆಯನ್ನು ನಿಧಾನಿಸುವ ಫ್ಲೋರಿನ್ ಅನ್ನು ಖರ್ಜೂರ ಒಳಗೊಂಡಿದೆ.
  • ಮಲಬದ್ಧತೆಗೂ ಉತ್ತಮ ಪರಿಹಾರವನ್ನು ಖರ್ಜೂರ ನೀಡುತ್ತದೆ. ಖರ್ಜೂರವನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ನೀರಿನೊಂದಿಗೆ ಸೇವಿಸಿ ಫಲ ನಿಮ್ಮದಾಗುತ್ತದೆ.
  • ಲೈಂಗಿಕ ಸಾಮರ್ಥ್ಯವನ್ನು ಏರಿಸುವಲ್ಲಿ ಖರ್ಜೂರದ ಮಹತ್ವ ಹಿರಿದು. ಒಂದು ಮುಷ್ಟಿಯಷ್ಟು ಖರ್ಜೂರವನ್ನು ಆಡಿನ ಹಾಲಿನೊಂದಿಗೆ ರಾತ್ರಿ ಪೂರ್ತಿ ನೆನೆಸಿಡಿ.ಮರುದಿನ ಬೆಳಗ್ಗೆ ಖರ್ಜೂರವನ್ನು ಹಾಲಿನೊಂದಿಗೆ ಕಡೆಯಿರಿ ಇದಕ್ಕೆ ಜೇನು ಮತ್ತು ಏಲಕ್ಕಿ ಹುಡಿ ಸೇರಿಸಿ ಸೇವಿಸಿ. ಇವುಗಳು ಕೊಬ್ಬಿನಿಂದ ಮುಕ್ತವಾಗಿದ್ದು ದೈಹಿಕ ಚಟುವಟಿಕೆಯನ್ನು ಕಾಪಾಡುತ್ತವೆ. ಸಂಗ್ರಹಿಸಲು ಯೋಗ್ಯವಾಗಿರುವ ಆಹಾರ ಪದಾರ್ಥಗಳಾದ ಡ್ರೈ ಫ್ರುಟ್ಸ್‌ನಿಂದ ಕೊಲೆಸ್ಟ್ರಾಲ್ ಬರಬಹುದೆಂಬ ಭೀತಿ ಬೇಡ.ಇಂದು ನಾವು ಆರೋಗ್ಯಕರವಾದ ಡ್ರೈಫ್ರುಟ್ ಖರ್ಜೂರದ ಬಗೆಗೆ ಮಾಹಿತಿ ನೀಡುತ್ತಿದ್ದೇವೆ.ಅರಬ್ ದೇಶದ ಹಣ್ಣಾದ ಖರ್ಜೂರ ದೇಶೀಯ ನೆಲೆದಲ್ಲೂ ತನ್ನ ಕಂಪನ್ನು ಬೀರಿದ ಹಣ್ಣು.ಬಿಸಿಲ ಬೇಗೆಗೆ ಬೆಂದು ಮಾನವನಿಗೆ ಆರೋಗ್ಯಕರ ಅಂಶವನ್ನು ನೀಡುವ ಖರ್ಜೂರ ಹಲವಾರು ರೋಗಗಳ ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿಯನ್ನು ನೀಡುತ್ತದೆ.

ಇದನ್ನೂ ಓದಿ