Thu. Jan 9th, 2025

ತಲಾಖ್: ಮುಸ್ಲಿಮರಲ್ಲೇ ಅತ್ಯಂತ ಕಡಿಮೆ..!! ಸಮೀಕ್ಷಾ ವರದಿಯಿಂದ ಬಹಿರಂಗ

ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ಮೂಲಕ ಮೋದಿ ನೇತೃತ್ವದ ಕೇಂದ್ರ ಸರಕಾರವು ಮುಸ್ಲಿಂ ಸಮುದಾಯದ ಮಹಿಳೆಯರ ಬಹುದೊಡ್ಡ ಸಮಸ್ಯೆಯೊಂದನ್ನು ಪರಿಹರಿಸಿದಂತೆ ಬಿಂಬಿಸುತ್ತಿದ್ದಾರೆ. ಆದರೆ ನಿಜಕ್ಕೂ ತಲಾಖ್ ಎಂಬುವುದು ಮುಸ್ಲಿಂ ಮಹಿಳೆಯರ ಬಹುದೊಡ್ಡ ಸಮಸ್ಯೆಯಾಗಿತ್ತೇ ಅಥವಾ ಮುಸ್ಲಿಂ ವಿರೋಧಿ ನಿಲುವು ತಾಳಿರುವ ಸಂಘಪರಿವಾರ ನಿಯಂತ್ರಿತ ಸರಕಾರದ ಕುತಂತ್ರವಾಗಿತ್ತೇ ಎಂಬ ಬಗ್ಗೆ ಎಲ್ಲೆಡೆ ಭಾರೀ ಚರ್ಚೆ ನಡೆಯುತ್ತಿರುವಾಗಲೇ ಎದುರಾಳಿಗಳ ಕಣ್ಣು ತೆರೆಸುವಂತಹ ಸುದ್ದಿಯೊಂದು ಹೊರಬಿದ್ದಿದೆ. ಇತರ ಧರ್ಮಿಯರೊಂದಿಗೆ ಹೋಲಿಸಿದರೆ ಅತ್ಯಂತ ಕಡಿಮೆ ವಿವಾಹ ವಿಚ್ಛೇಧನ ನಡೆಯುವುದು ಮುಸ್ಲಿಮರಲ್ಲಿ ಎಂದು ಸ್ಪಷ್ಟಪಡಿಸುವ ಅಧ್ಯಯನ ವರದಿಯೊಂದು ಬಹಿರಂಗಗೊಂಡಿದೆ. ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಹಿಳಾ ವಿಭಾಗದ ಅಧ್ಯಕ್ಷೆ ಅಸ್ಮಾ ಝುಹ್ರಾ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ದೇಶದ ವಿವಿಧ ರಾಜ್ಯಗಳ ವಿವಿಧ ಕೌಟುಂಬಿಕ ನ್ಯಾಯಾಲಯಗಳಿಂದ ಸಂಗ್ರಹಿಸಿದ ಮಾಹಿತಿಗಳ ಆಧಾರದ ಮೇಲೆ ಈ ಲೆಕ್ಕಾಚಾರವನ್ನು ಬಹಿರಂಗಪಡಿಸಲಾಗಿದೆ. ಇದರಿಂದ ಸ್ಪಷ್ಟವಾಗುವುದೇನೆಂದರೆ ಇಸ್ಲಾಮಿನಲ್ಲಿ ಮಹಿಳೆಯು ಸುರಂಕ್ಷಿತಳಾಗಿದ್ದಾಳೆಂದೂ ಮುಸ್ಲಿಂ ಮಹಿಳೆಯರಲ್ಲಿ ವಿವಾಹ ವಿಚ್ಛೇದನವು ಅತ್ಯಂತ ವಿರಳವಾಗಿದೆ ಎಂದು ಮಹಿಳಾ ವಿಭಾಗದ ಆರ್ಗನೈಝರ್ ಅಸ್ಮಾ ಝುಹ್ರಾ ತಿಳಿಸಿದರು. ತ್ರಿವಳಿ ತಲಾಖ್‌ಗೆ ಸಂಬಂಧಪಟ್ಟಂತೆ ದೂರು ನ್ಯಾಯಾಯದಲ್ಲಿರುವಾಗಲೇ ಇಂತಹದೊಂದು ಸುದ್ದಿ ಹೊರಬಿದ್ದಿದೆ.

2011ರಿಂದ 2015ರವರೆಗಿನ ಕಾಲಾವಧಿಯಲ್ಲಿ ನಡೆದ ಘಟನೆಗಳನ್ನಾಧರಿಸಿ ಈ ಅಧ್ಯಯನವನ್ನು ನಡೆಸಲಾಗಿತ್ತು. ಮೇ ತಿಂಗಳಲ್ಲಿ ಪ್ರಾರಂಭಿಸಿದ ಈ ಅಧ್ಯಯನವು, ವಿವಿಧ ನ್ಯಾಯಾಲಯಗಳಿಂದ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಅಂಕಿ ಅಂಶಗಳನ್ನು ಸಂಗ್ರಹಿಸಲಾಗಿತ್ತು. 16 ನ್ಯಾಯಾಲಯಗಳನ್ನು ಸಂಪೂರ್ಣವಾಗಿ ಮಾಹಿತಿಗಳನ್ನು ಹಸ್ತಾಂತರಿಸಿದ್ದರು.

ಮಹಿಳಾ ಶರೀಅತ್ ಸಮಿತಿ ಹಾಗೂ ಮುಸ್ಲಿಂ ಮಹಿಳಾ ರಿಸರ್ಚ್ ಸೆಂಟರ್‌ನ ಸಹಯೋಗದೊಂದಿಗೆ ನಡೆಸಿದ ಅಧ್ಯಯನದಲ್ಲಿ, ಹಿಂದೂಗಳ ಪೈಕಿ 16,505 ವಿವಾಹ ವಿಚ್ಛೇದನ ನಡೆದರೆ, ಮುಸ್ಲಿಂಗಳ ಪೈಕಿ 1,307 ಮಾತ್ರ ವಿವಾಹ ವಿಚ್ಛೇದನ ನಡೆದಿದೆ ಎಂದು ಸ್ಪಷ್ಟಪಡಿಸಿದೆ. ಕ್ರಿಶ್ಚಿಯನ್ನರ ಪೈಕಿ 4,827 ಹಾಗೂ ಸಿಕ್ಕರ ಪೈಕಿ 8 ವಿವಾಹ ವಿಚ್ಛೇದನ ಪ್ರಕರಣಗಳು ದಾಖಲಾಗಿವೆ.

ಭಾರತದ ಪ್ರಮುಖ 8 ಜಿಲ್ಲೆಗಳಾದ ಕಣ್ಣೂರು(ಕೇರಳ), ನಾಸಿಕ್(ಮಹಾರಾಷ್ಟ್ರ), ಕರೀಂ ನಗರ (ತೆಲಂಗಾಣ), ಗುಂಟೂರು (ಆಂದ್ರಪ್ರದೇಶ) ಸಿಂಖಂದರಬಾದ್(ತೆಂಗಾಣ) ಮಲಪ್ಪುರಂ (ಕೇರಳ), ಎರ್ನಾಕುಳಂ (ಕೇರಳ) ಆಧಾರವಾಗಿಟ್ಟುಕೊಂಡು ಈ ಅಧ್ಯಯನವನ್ನು ನಡೆಸಲಾಗಿತ್ತು.

ಇದನ್ನೂ ಓದಿ